21.8.09

ತಂತ್ರಘ್ನ್ಯಾನದ ಪ್ರಭಾವ

ಟಿ. ವಿ ಸಣ್ಣ ಆಯಿತು ಮನುಷ್ಯ ದಪ್ಪ ಆದ

17.7.09

ಶಾಲಾ ವಾಹನ ಜಪಾನ್ ಮತ್ತು ಭಾರತ




ಕಡೇ ಫೋಟೋವನ್ನು ಸ್ವಲ್ಪ ಗಮನಿಸಿ ಶಾಲೆಯ ಹೆಸರು ವಿಳಾಸ ನೋಡಿ

ಈ ಹುಡುಗಿ(ಗ) ನ ಮದ್ವೆಗೆ ರೆಡಿ !!!!!!!!!!!

ಇದು ಸಚಿನ್ ತೆಂಡುಲ್ಕರ್ ಕಾಲೇಜಿನ ಪ್ಯಾನ್ಸಿ ಡ್ರೆಸ್ !!!!

2.7.09

ಸುಂದರ ಸರ್ಪಗಳು! ?? BEAUTIFUL SNAKES!??

ಸರ್ಪಗಳು ಭಯಾನಕ ಮಾತ್ರವಲ್ಲ ಅತ್ಯಂತ ಸುಂದರ ಅಷ್ಟೇ ರೋಮಾಂಚನಕಾರಿ ಸೃಷ್ಟಿಯೂ ಹೌದು !



















30.6.09

ನಂಬಿಕೆಯೇ ಬದುಕು

ನಂಬಿದನು ಪ್ರಹ್ಲಾದ ನಮ್ಬದಿರ್ದನು ತಂದೆ
ನಂಬಿಯು ನಂಬದಿಹ ಇಬ್ಬಂದಿ ಸ್ತಿತಿ ನೀನು|
ನಮ್ಬಿಯೋ ನಂಬದೆಯೋ ಮೋಕ್ಷವವರಿಂಗಾಯ್ತು
ಸಿಮ್ಬಳದಿ ನೊಣ ನೀನು ಮಂಕುತಿಮ್ಮ ! ||

ಡಿ.ವಿ.ಜಿ ಯವರ ಮರುಳ ಮುನಿಯನ ಕಗ್ಗ

ಸಿರಿಯೇಕೋ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೇ ? |
ಧರೆಯ ದಿನೈನದ ಬಣ್ಣಗಳಿಗೇಂ ಬೆಲೆಯೆ? ||
ಹರುಷವಂಗಡಿಸರಕೆ ? ಹೃದಯದೊಳಚಿಲುಮೆಯದು |
ಸರಸತೆಯೆ ಸಿರಿತನವೋ - ಮರುಳ ಮುನಿಯ ||

ಅಪರೂಪದ ಹೂಗಳು !!





ಲಿಂಗದ ಹೂವು ಅಥವಾ ನಾಗಲಿಂಗಪುಷ್ಪ/ ನಾಗಲಿನ್ಗ್ದಹೂವು ಎಂದು ಕರೆಯುವ ಈ ಹೂಗಳು ಅತ್ಯಂತ ಅಪರೂಪವಾಗಿವೆ ಸಾಮಾನ್ಯವಾಗಿ ಇದು ಊರಿನ ಹರಭಾಗ, ದೇವಸ್ಥಾನದ ಆವರಣಗಳಲ್ಲಿ ಕಾಣಬರುತ್ತವೆ. ಆದರೆ ನಾನು ಇದನ್ನು ಕಂಡಿದ್ದು ಬೆಂಗಳೂರಿನ ಒಂದು ಜನನಿಬಿಡವಾದ ರಸ್ತೆಯಲ್ಲಿ !!!!!!!!!!!!!

27.6.09

ನಿಸ್ವಾರ್ಥ ಚಿಂತನ - ಮಹಾಭಾರತ

ಮಹಾಭಾರತದಲ್ಲಿ ಬರುವ ಯಕ್ಷಪ್ರಶ್ನೆ ಎಲ್ಲರಿಗು ತಿಳಿದ ವಿಷಯವೇ ಆದರೆ ಈ ಯಕ್ಷಪ್ರಶ್ನೆಯ ಸನ್ನಿವೇಶದಿಂದ ನಾವು ತಿಳಿಯಬೇಕಾಗಿರುವ ವಿಷಯ ಬಹಳ ಮೌಲಿಕ ವಾದದ್ದು ಮತ್ತು ಸಾರ್ವಕಾಲಿಕ ವಾದದ್ದು.

ಯಕ್ಷಪ್ರಶ್ನೆಯು ಮುಗಿದನಂತರ ಯಕ್ಷನು ಧರ್ಮರಾಯನನ್ನು ಕುರಿತು ನಿನ್ನ ಈ ನಾಲ್ವರು ತಮ್ಮಂದಿರಲ್ಲಿ ಯಾರನ್ನಾದರೂ ಒಬ್ಬನನ್ನು ನಾನು ಬದುಕಿಸಿ ಕೊಡುವೆ ಆದರೆ ಆ ಒಬ್ಬ ಯಾರೆಂದು ನೀನೆ ನಿರ್ಧರಿಸಿ ಹೇಳು ಎಂದಾಗ ಎರಡನೇ ಯೋಚನೆಯೇ ಇಲ್ಲದೆ ಧರ್ಮರಾಯನು ನಕುಲನನ್ನು ಬದುಕಿಸಬೇಕೆಂದು ಕೇಳುತ್ತಾನೆ ಯಕ್ಷನು ಆಶ್ಚರ್ಯದಿಂದ ನಕುಲನೇ ಏಕೆ ಭೀಮಾರ್ಜುನರಲ್ಲಿ ಒಬ್ಬರನ್ನು ಬದುಕಿಸಿದರೆ ಮುಂದೆ ರಾಜ್ಯವನ್ನು ಮರಳಿ ಪಡೆಯಲು ನೆರವಾಗುತ್ತಾರೆ ಅಲ್ಲದೆ ಭೀಮಾರ್ಜುನರ ವಿನಃ ರಾಜ್ಯವನ್ನು ಪಡೆಯುವುದು ಕಷ್ಟಮಾತ್ರವಲ್ಲ ಅಸಾಧ್ಯವೂ ಹೌದು ಎಂದಾಗ ಧರ್ಮರಾಯನು ಅತ್ಯಂತ ಹೃದಯಸ್ಪರ್ಶಿ ಮಾತನ್ನು ಹೇಳುತ್ತಾನೆ.

ಪಾಂಡು ಮಹಾರಾಜನಿಗೆ ಕುಂತಿ ಮತ್ತು ಮಾದ್ರಿ ಇಬ್ಬರು ಪತ್ನಿಯರು, ಕುಂತಿಯ ಮಗನಾಗಿ ನಾನು ಬದುಕಿದ್ದೇನೆ, ನನ್ನ ರಾಜ್ಯಲೋಭದಿಂದ ಭೀಮಾರ್ಜುನರನ್ನು ಬೇಡಿದರೆ ನಾಳೆ ಮಾದ್ರಿಯ ಹೆಸರನ್ನು ಹೇಳಲು ಅವಳ ಮಕ್ಕಳ್ಯಾರೂ ಇರುವುದಿಲ್ಲ . ಆದ್ದರಿಂದ ನನಗೆ ರಾಜ್ಯವು ಬರದಿದ್ದರೂ ಪರವಾಗಿಲ್ಲ ಬದುಕಿರುವವರೆಗೂ ಕಾಡಿನಲ್ಲಿಯೇ ಧರ್ಮದಿಂದ ಬದುಕುತ್ತೇನೆ ಎನ್ನುತ್ತಾನೆ.

ಭೀಮಾರ್ಜುನರು ಧರ್ಮರಾಯನಿಗಿ ಕೇವಲ ಅವಶ್ಯಕವಲ್ಲದೆ ಅನಿವಾರ್ಯವೂ ಆಗಿದ್ದರು. ಭೀಮನ ಭುಜಭಲ ಹಾಗು ಅರ್ಜುನನ ಶಸ್ತ್ರಬಲದಮೆಲೆಯೇ ಧರ್ಮರಾಯನ ಭವಿಷ್ಯವು ಹಾಗು ಮಹಾಭಾರತದ ನಿರ್ಣಯವೂ ಅವಲಂಬಿತವಾಗಿತ್ತು. ಅದೂ ಅಲ್ಲದೆ ಕುಂತಿಯು ಕೊಟ್ಟ ಮಂತ್ರಬಲದಿಂದಲೇ ಮಾದ್ರಿಯು ನಕುಲ ಸಹದೇವರನ್ನು ಪಡೆದಿದ್ದಳು. ಆದರೂ ಧರ್ಮರಾಯನು ಧರ್ಮದ ಹಾದಿಯನ್ನು ಬಿಡದೆ ಸ್ವಾರ್ತವನ್ನು ಬಿಟ್ಟು ನಕುಲನನ್ನು ಬದಿಕಿಸಬೇಕೆಂದು ಬೇಡಿದನು. ನಿಜವಾದ ನಿಸ್ವಾರ್ತ ಬದುಕು ಬದುಕುವದು ಹೇಳುವಷ್ಟು ಸುಲಭವಲ್ಲ. ಕಾರ್ಯತಃ ಸಂಕಷ್ಟದಲ್ಲಿರುವಾಗ ನಿಸ್ವಾರ್ಥ ವನ್ನು ಮೆರೆಯುವದು ನಿಜಕ್ಕೂ ಧೀರತನ.
ಇದರಿಂದ ಕಲಿಯಬೇಕಾದದ್ದು ............................................ ಅವರವರಿಗೆ ಬಿಟ್ಟದ್ದು